ಬನ್ನಿ ನಾವೆಲ್ಲಾ ಸೇರಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ದೇಶದ ಸೇವೆಗೆ ನಿಯೋಜಿಸೋಣ.
ನರೇಂದ್ರ ಮೋದಿ ಕಾವಲುಗಾರನಾಗಿ ಸೇವೆ ಶುರುಮಾಡಿದಾಗಿನಿಂದ ಇಂದಿನವರೆಗೆ ತಾನು ದೇಶದ ಜನತೆಗೆ ನೀಡಿದ ವಚನದಂತೆ “ತಾನೂ ತಿನ್ನಲಿಲ್ಲ, ಸಹವರ್ತಿಗಳಿಗೂ ತಿನ್ನಲು ಬಿಡಲಿಲ್ಲ”. 48 ತಿಂಗಳುಗಳ ಕಾಲ ಒಂದೇ ಒಂದು ಹಗರಣದ ಸುಳಿವಿಲ್ಲ. ಭಾರತವೆಂದರೆ ಮೂಗುಮುರಿಯುತ್ತಿದ್ದ ವಿದೇಶಿಯರಿಗೆ, ಹುಬ್ಬೇರಿಸಿ, ಕಣ್ಣರಳಿಸಿ, ಕಿವಿಯಗಲಿಸಿ ಭಾರತದ ಬಗ್ಗೆ ಗೌರವವನ್ನು ತಾಳುವಂತೆ ಮಾಡುವಲ್ಲಿ ನರೇಂದ್ರ ಮೋದಿಯವರ ಕೊಡುಗೆ ಅಪಾರ. ಕೇವಲ 4 ವರ್ಷಗಳಲ್ಲಿ ಜಗತ್ತಿನ ಬಲಿಷ್ಠ ದೇಶಗಳನ್ನು ಹಿಂದಿಕ್ಕಿ, ದೇಶದ ಚಿತ್ರಣವನ್ನೇ ಬದಲು ಮಾಡಿದ ಸಾಧಕನ ಕೈಯಲ್ಲಿ ಇನ್ನೂ 5 ವರ್ಷ ಈ ದೇಶವನ್ನು ಕಾಯುವ ಕೆಲಸವನ್ನು ಕೊಡೋಣ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಸಿಂಹವನ್ನು ಎದುರಿಸುವ ಸಾಮರ್ಥ್ಯವಿಲ್ಲದ ನರಿ ತೋಳಗಳು ಮತ್ತೆ ಒಂದಾಗಿವೆ. ಹೇಗಾದರೂ ಮಾಡಿ ಈ ಕಾವಲುಗಾರನಿಂದ ಮುಕ್ತಿ ಪಡೆದು ದೇಶವನ್ನು ಲೂಟಿ ಮಾಡಲು ಹೊಂಚು ಹಾಕುತ್ತಿವೆ. ಇದನ್ನು ನೋಡಿ ಸುಮ್ಮನಿರುವ ಜಾಯಮಾನ ನಮ್ಮದಲ್ಲ. ನಾವು ಮತ್ತೆ “ನಮೋ ಭಾರತ್” ಎಂಬ ಹೆಸರಿನೊಂದಿಗೆ ಬಂದಿದ್ದೇವೆ. ಸಮಾನ ಮನಸ್ಕರೆಲ್ಲಾ ಒಂದಾಗಿದ್ದೇವೆ. ಮತ್ತೆ ರಣಕಹಳೆ ಊದಲಿದ್ದೇವೆ. ಊದುವ ಉಸಿರು ನೀವಾಗಿ, ಬನ್ನಿ ನಮ್ಮ ದೇಶಸೇವಾ ಕಾರ್ಯಕ್ಕೆ ನಮಗೆ ಬೆಂಬಲವಾಗಿ ನಿಲ್ಲಿ. ನಾವೆಲ್ಲಾ ಸೇರಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ದೇಶದ ಸೇವೆಗೆ ನಿಯೋಜಿಸೋಣ.