Use APKPure App
Get ವಚನ old version APK for Android
ವಚನಗಳ ಹೆವ್ವೊಕ್ಕಣೆ - ಇನ್ನೂರಕ್ಕೂ ಹೆಚ್ಚು ಶಿವಶರಣರ ಇಪ್ಪತ್ತುಸಾವಿರಕ್ಕೂ ಹೆಚ್ಚು ವಚನಗಳು
ಆಂಡ್ರಾಯ್ಡ್ ಕದಲುಲಿ ಬಳಕೆಗಳ ಸಂಗ್ರಹದಂಗಡಿಯಲ್ಲಿ (playstore) ದೊರಕುವ, ಬಹಳಷ್ಟು ವಚನಗಳ ಬಳಕೆಗಳನ್ನು ಬಳಸಿನೋಡಿದಾಗ ಅವುಗಳಲ್ಲಿ ಏನಾದರೊಂದು ತೊಡಕುಗಳಿದ್ದು ಅದರಿಂದ ಬೇಸತ್ತು, ಒಬ್ಬ ಸಾಮಾನ್ಯ ವಚನ-ಸಾಹಿತ್ಯಾಕಾಂಕ್ಷಿಯಾಗಿ ಹುಡುಕುವಾಗ ನನಗೆ ಅನಿಸಿದ್ದ ಬೇಕುಗಳನ್ನೆಲ್ಲ ಸೇರಿಸಿ, ಬೇಡಗಳನ್ನೆಲ್ಲ ನೀಗಿಸಿ, ಬಹಳಷ್ಟು ಜಾಲತಾಣಗಳಿಂದ ಬಹುದಿನಗಳಿಂದ ಕಲೆಹಾಕಿ ಮಾಡಿದ ಬಳಕೆಯಿದು.
ಇದರಲ್ಲಿ ಯಾವುದೇ ವಿಳಂಬರಗಳ ತೊಡಕಿಲ್ಲ, ಬೇಡದ-ಬೇಡದವರ ಅನಿಸಿಕೆ-ಅಭಿಪ್ರಾಯಗಳಿಲ್ಲ. ಒಲ್ಲದ-ಒಗ್ಗದ ಅನಿಷ್ಠ ಸಮಯಾಚಾರಿಗಳ ಹೇರಿಕಾಭಾಸವಿಲ್ಲ. ಅಪ್ಪಟ ಶಿವಶರಣರ ಮೂಲ ವಚನಗಳನ್ನು ಆದಷ್ಟು ಯಥಾವತ್ ರೂಪದಲ್ಲೇ ಒದಗಿಸುವ ಕಿರುಪ್ರಯತ್ನ .
ಇದೊಂದು ವಚನಗಳ ಹೆವ್ವೊಕ್ಕಣೆ - ಇದರಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಶಿವಶರಣರ ಇಪ್ಪತ್ತುಸಾವಿರಕ್ಕೂ ಹೆಚ್ಚು ವಚನಗಳನ್ನು ಕಲೆಹಾಕಲಾಗಿದೆ. ಯಾವುದೇ ವಚನಕಾರ ಅಲ್ಲವೇ ಅವರ ಅಂಕಿತನಾಮ ಅಲ್ಲವೇ ಅವರ ವಚನ(ಗಳ) ಕುರುಹು-ತುಣುಕುಗಳನ್ನು ಬರೆದು ಹೆಚ್ಚು ಮಾಹಿತಿ ಅಲ್ಲವೇ ಪೂರ್ಣ ವಚನವನ್ನು ಸುಲಭವಾಗಿ ಹುಡುಕಲು ಒದಗಬಲ್ಲ ಬಳಕೆ ಇದು.
ವಚನದ(ಗಳ)ಲ್ಲಿನ ತಿಳಿಯದ ಪದಗಳ ಕಿರು-ಧಾತುವನ್ನು(ಪದದ ಮೊದಲ ಕೆಲವು ಅಕ್ಷರಗಳನ್ನು) ಆರಿಸಿ(ಅಕ್ಷರಗಳ ಮೇಲೆ ಒತ್ತಿಹಿಡಿಯುವುದು ಅಲ್ಲವೇ ಎರಡು ಬಾರಿ ತಟ್ಟುವುದು) ಅದರ ಅರ್ಥವನ್ನು ("ನಾನಾರ್ಥ" ಆಯ್ಕೆಯನ್ನು ಆಯ್ದು) ಸುಲಭವಾಗಿ ತಿಳಿಯಬಹುದಾಗಿದೆ.
ವೀರಶೈವ ಸಮಯಾಚಾರಕ್ಕೆ ನನ್ನಿಂದ ಸಾಧ್ಯವಾಗಬಹುದಾದ ದಾಸೋಹಗಳಾವುವು ಎಂದು ಆರಾಯುವಾಗ ಹೊಳೆದುದೇ ಈಬಳಕೆಯಾಗಿ ಪರಿಜುಪಡೆದು ಮೈತಾಳಿದೆ. ಈ ಬಳಕೆಯಲ್ಲಿ, ಬಳಕೆ ಒದಗಿಸುವ ಮಾಹಿತಿಯಲ್ಲಿ - ಯಾವುದರಲ್ಲಿಯಾದರೂ, ಏನೇ ಆದರೂ ತಪ್ಪಿದ್ದಲ್ಲಿ ನನ್ನ ಮಿಂಚಂಚೆಗೆ [email protected] ಬರೆದು ತಿಳಿಸಬೇಕಾಗಿ ಕೋರಿಕೆ.
Last updated on Aug 18, 2022
Updating Privacy policy - https://nudibayake.blogspot.com/2018/09/privacy-policy-for-android-apps.html - This app hosts only OFFLINE DATA and Do not Require any sort of explicit or implicit permissions from the user
اپ لوڈ کردہ
Lucas Rhyan Escobar
Android درکار ہے
Android 4.0.3+
کٹیگری
رپورٹ کریں
ವಚನ ಕಮ್ಮಟ
1.0.0.15 by Narendra Prabhu Gurusiddappa
Aug 18, 2022